SHARAVATHI KANNADA BALAGA CORPORATION, Maryland 202-768-8161mail.president@sharavationline.org

About Us

ಶರಾವತಿ ಕನ್ನಡ ಬಳಗ

ಕನ್ನಡಿಗರಿಂದ ಕನ್ನಡಿಗರಿಗಾಗಿ ಮತ್ತು ಕನ್ನಡಕ್ಕಾಗಿ ಪ್ರಾರಂಭವಾಗುತ್ತಿರುವ ಲಾಭರಹಿತ ಸಂಸ್ಥೆ. ಈ ಸಂಸ್ಥೆಯು ಕರ್ನಾಟಕ ರಾಜ್ಯದಿಂದ ಬಂದ ಜನರಿಗೆ, ಕನ್ನಡ ನಾಡು ನುಡಿ ಭಾಷೆಯನ್ನು ಉಳಿಸಿ, ಬೆಳೆಸುವ ಸಲುವಾಗಿ ಒಂದು ವೇದಿಕೆಯನ್ನು ಪ್ರಸ್ತುತಪಡಿಸುವ ಸಂಸ್ಥೆಯಾಗಿದೆ. ” ಶರಾವತಿ ಕನ್ನಡ ಬಳಗ ” ಈ ಹೆಸರಿನ ಉಗಮ ಮತ್ತು ಇದರ ಹಿಂದಿನ ಪ್ರೇರಣೆ ಶರಾವತಿ ನದಿ.ಶರಾವತಿ ನದಿಯು ಸಂಪೂರ್ಣವಾಗಿ ಕರ್ನಾಟಕ ರಾಜ್ಯದಲ್ಲಿ ಹರಿಯುತ್ತದೆ ಮತ್ತು ಪಶ್ಚಿಮ ಘಟ್ಟಗಳಲ್ಲಿ ಇರುವ ಪ್ರಮುಖ ನದಿಗಳಲ್ಲೊಂದಾಗಿದೆ.ಪುರಾತನ ಐತಿಹ್ಯಗಳ ಪ್ರಕಾರ, ಶ್ರೀರಾಮ ಸೀತೆಯ ಬಾಯಾರಿಕೆ ತಣಿಸಲು ನೆಲದ ಮೇಲೆ ಬಾಣವನ್ನು ಬಿಟ್ಟಾಗ ಶರಾವತಿ ನದಿಯು ಹುಟ್ಟಿಕೊಂಡಿತು.

ಅಂತೆಯೇ “ಶರಾವತಿ ಕನ್ನಡ ಬಳಗ” ದ ಪ್ರಾಥಮಿಕ ಗುರಿ ಅಮೇರಿಕಾದಲ್ಲಿ ನೆಲೆಸಿರುವ ಕನ್ನಡಿಗರ ಕಲೆ ಮತ್ತು ಭಾಷೆಯ ಬಾಯಾರಿಕೆ ತಣಿಸುವ ಅನುಗುಣವಾಗಿ ವೇದಿಕೆಯನ್ನು ಒದಗಿಸುವುದು, ಕನ್ನಡಿಗರ ಜೊತೆ ಬೆರೆಯಲು, ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಪರಿಚಯಿಸಿ ಉತ್ತೇಜಿಸುವುದು.

ಈ ದೃಷ್ಟಿಕೋನದಿಂದ, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದಾಹರಣೆಗೆ ಹಾಡು, ನೃತ್ಯ, ನಾಟಕ, ಭಾಷಣ, ಸಂದರ್ಶನ ಇತ್ಯಾದಿಗಳನ್ನು ಆಯೋಜಿಸಿ ಕನ್ನಡಿಗರಿಗೆ ಭಾಗವಹಿಸಲು ಮತ್ತು ತಮ್ಮೊಳಗಿನ ಪ್ರತಿಭೆಯನ್ನು ಬೆಳಕಿಗೆ ತರಲು ಅವಕಾಶ ಕಲ್ಪಿಸಿ ಈ ಕಾರ್ಯಕ್ರಮಗಳನ್ನು ಸಾಮಾಜಿಕ ತಾಣಗಳಲ್ಲಿ ಪ್ರಸಾರ ಮಾಡಿ ಪ್ರತಿಯೊಬ್ಬ ಕನ್ನಡಿಗರಿಗೂ ತಲುಪಿಸುವುದೇ “ಶರಾವತಿ ಕನ್ನಡ ಬಳಗ” ದ ಉದ್ದೇಶ. ಈ ನಮ್ಮ ಪ್ರಯತ್ನಕ್ಕೆ ಅಮೇರಿಕಾದಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರ ಬೆಂಬಲವನ್ನು ನಿರೀಕ್ಷಿಸುತ್ತಿದ್ದೇವೆ.

ಒಟ್ಟಿಗೆ, ನಾವು ಕನ್ನಡ ಕಸ್ತೂರಿಯ ಪ್ರಯಾಣವನ್ನು ನಡೆಸೋಣ !

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ !

Sharavathi Kannada Balaga

From Kannadigas to Kannadigas“ is a non-profit organization for people that hail from the Karnataka state of India, and for those who can speak the Kannada language. Sharavathi Kannada Balaga derives its name from the Sharavathi River that flows in its entirety in Karnataka.

According to ancient legends, birth of Sharavathi River took place when God Rama’s arrow hit the ground to quench Goddess Sita’s thirst. Similarly the primary goal of Sharavathi Kannada Balaga is to provide a platform that quenches the thirst of Kannadigas across USA to socialize with other Kannadigas, unearth talents, and to promote our cultural and social heritage to the next generation of Kannadigas.

Keeping this vision, Sharavathi Kannada Balaga’s aim is to conduct and broadcast recurring events where Kannadigas all over the world can get to watch and participate in these cultural events. The events will have few segments ranging from singing, dancing, dramas, speeches, interviews, etc. This is a new initiative and looking forward for support from all Kannadigas in USA.

Together, we walk the beautiful Kannada Kasturi journey!